BBK Winner: ಬಿಗ್‌ಬಾಸ್ ಕಪ್ ಗೆದ್ದಾಯ್ತು, 50 ಲಕ್ಷ ಹಣವನ್ನು ಇದಕ್ಕಾಗಿ ಬಳಸ್ತಾರಂತೆ ಹಳ್ಳಿಹೈದ ಹನುಮಂತ! Bigg Boss Kannada 11 Grand Finale: ಬಿಗ್‌ಬಾಸ್ ಸೀಸನ್ 11ರ ಕಪ್‌ ಮತ್ತು 50 ಲಕ್ಷ ಹಣವನ್ನು ಗೆದ್ದ ಹಳ್ಳಿ ಹೈದ ಹನುಮಂತ ಅವರು ಬಿಗ್‌ಬಾಸ್‌ನಿಂದ ಬಂದ ಹಣದಲ್ಲಿ ಏನು ಮಾಡ್ತಾರೆ? ಅವರು ಮಾಡುವ ಮೊದಲ ಕೆಲಸ ಏನು ಅನ್ನೋದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಇದಕ್ಕೆ ಉತ್ತರ ಇಲ್ಲಿದೆ.


ಹೌದು.. ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾದ 15 ದಿನಗಳ ನಂತರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಗಾಯಕ ಹನುಮಂತ ಲಮಾಣಿ ಆರಂಭದಿಂದ ಕಡೆಯತನಕ ತಮ್ಮ ಸಮಚಿತ್ತದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಕರ್ನಾಟಕದ ಜನರ ಮನಗೆದ್ದಿದ್ದರು. ಇದರ ಫಲವಾಗಿಯೇ 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಕಪ್ ಗೆಲ್ಲುವ ಮೂಲಕ ರೆಕಾರ್ಡ್ ಬರೆದಿದ್ದಾರೆ 




ಜಗದೀಶ್ ಹಾಗೂ ರಂಜಿತ್ ಹೊಡೆದಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಬಳಿಕ, ಜನರು ಬಿಗ್‌ಬಾಸ್ ನೋಡೋದೇ ಇಲ್ಲ, ಇನ್ಮುಂದೆ ಶೋ ಬೋರ್ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಮಾತಾಡಿಕೊಂಡಿದ್ದರು. ಆದರೆ ಆ ಖಾಲಿಯನ್ನು ತುಂಬಲು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತು ದೊಡ್ಮನೆಗೆ ಹೊಸ ಕಳೆ ತುಂಬಿದ್ದರು. ನಾನು ಗೆಲ್ಲೋಕೆ ಬಂದಿಲ್ಲ, ಇರೋವಷ್ಟು ದಿನ ಜಾಲಿ ಮಾಡಿ ಖುಷಿಯಾಗಿರ್ತೀನಿ ಎಂದು ಹೇಳಿ ಜನರ ಮೆಚ್ಚುಗೆ ಗಳಿಸಿದ್ದರು.

ಇದೀಗ ಘಟಾಟುಘಟಿಗಳನ್ನೇ ಸೋಲಿಸಿದ ಹನುಮಂತ ಬರೋಬ್ಬರಿ 50 ಲಕ್ಷ ರೂಪಾಯಿ ಗೆಲ್ಲುವ ಮೂಲಕ ಬಿಬಿಕೆ ಶೋನಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ. ಫಿನಾಲೆ ಗೆಲ್ಲುವ ವಿಷಯದಲ್ಲಿ ಹನುಮಂತು ಮತ್ತು ತ್ರಿವಿಕ್ರಮ್ ಮಧ್ಯೆ ಭಾರೀ ಪೈಪೋಟಿ ಇತ್ತು. ಆದರೆ ಅದೆಲ್ಲವನ್ನೂ ಮೀರಿಸಿ ಹನುಮಂತ ಕಪ್ ಗೆದ್ದಿದ್ದಾರೆ.

ಹನುಮಂತು ಕಪ್‌ ಗೆಲ್ಲುತ್ತಿದ್ದಂತೆ ಅವರ ಮುಖದಲ್ಲಿ ಕಂಡ ಅಚ್ಚರಿ ನಿಜವಾಗಲೂ ಗೆದ್ದನೇ ಎನ್ನುವಂತೆ ತೋರುತ್ತಿತ್ತು. ಸುದೀಪ್ ಕೈ ಎತ್ತಿ ವಿನ್ನರ್ ಘೋಷಣೆ ಮಾಡುತ್ತಿದ್ದಂತೆ ಸುದೀಪ್ ಕಾಲಿಗೆ ಬಿದ್ದ ಹನುಮಂತು ಗೆಲುವನ್ನು ಸಂಭ್ರಮಿಸಿದರು. ಆ ನಂತರ ಅವರ ಕುಟುಂಬ ಸದಸ್ಯರು ಬಂದು ಹನುಮಂತುರನ್ನು ಎತ್ತಿ ಕುಣಿದಾಡಿದರು.


ಇದೀಗ ಕಪ್‌ ಮತ್ತು 50 ಲಕ್ಷ ಹಣವನ್ನು ಗೆದ್ದ ಹನುಮಂತ ಅವರು ಬಿಗ್‌ಬಾಸ್‌ನಿಂದ ಬಂದ ಹಣದಲ್ಲಿ ಏನು ಮಾಡ್ತಾರೆ? ಅವರು ಮಾಡುವ ಮೊದಲ ಕೆಲಸ ಏನು ಅನ್ನೋದರ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಬೇರೆ ಯಾರೇ ಗೆದ್ದಿದ್ದರೂ ಆ ಹಣದಲ್ಲಿ ಅವರು ಏನು ಮಾಡ್ತಾರೆ ಅನ್ನುವ ಪ್ರಶ್ನೆ ಅಷ್ಟೇನೂ ಮುಖ್ಯವಾಗುತ್ತಿರಲಿಲ್ಲ ಅನ್ಸುತ್ತೆ. ಆದರೆ ನಮ್ಮ ಹಳ್ಳಿ ಹೈದನ ಕೈಗೆ ಸಿಕ್ಕ ಬರೋಬ್ಬರಿ 50 ಲಕ್ಷ ಹಣದಲ್ಲಿ ಅವರು ಮಾಡುವ ಮೊದಲ ಕೆಲಸ ಏನು ಎಂಬ ಬಗ್ಗೆ ಅಭಿಮಾನಿಗಳಿಗೆ ತೀವ್ರ ಕುತೂಹಲ ಇದೆ.


ಅಂದಹಾಗೆ ಹನುಮಂತ ಅವರು ತಾನೊಬ್ಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿಯೂ, ಬಿಗ್‌ಬಾಸ್‌ ಮುಗಿದ ಬಳಿಕ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದರು. ಹನುಮನ ಮನೆಯವರಿಗೆ ಒಪ್ಪಿಗೆ ಇಲ್ಲದಾಗ ಸುದೀಪ್ ಅವರೇ ವೇದಿಕೆಯಲ್ಲಿ ಹನುಮನ ಮನೆಯವರನ್ನು ಒಪ್ಪಿಸಿ ಹನುಮನ ಪ್ರೀತಿಗೆ ಹಸಿರು ಮುದ್ರೆ ಒತ್ತಿಸಿದ್ದರು. ಇದೀಗ ಆತನ ಪ್ರೀತಿ ಕೂಡ ಸಲೀಸಾಗಿದೆ. ಮನೆಯವರೂ ಮದುವೆಗೆ ಒಪ್ಪಿದ್ದಾರೆ.

ಆದರೆ ಹನುಮಂತ ತಾನು ಗೆದ್ದ ಹಣದಲ್ಲಿ ಏನು ಮಾಡ್ತೇನೆ ಎಂಬ ಬಗ್ಗೆ ಇಲ್ಲಿಯವರೆಗೆ ಎಲ್ಲೂ ಹೇಳಿಲ್ಲ. ನಿನ್ನೆ ರಾತ್ರಿ ಶೋ ಮುಗಿದಿದೆ ಇಂದು (ಸೋಮವಾರ) ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಈ ಬಗ್ಗೆ ಪ್ರಶ್ನೆಗಳು ಎದುರಾದರೆ ಆ ಪ್ರಶ್ನೆಗೆ ಉತ್ತರಿಸಬಹುದು. ಆದರೆ ಹನುಮಂತ ಅವರು ಒಂದೊಳ್ಳೆ ಮನೆ ಕಟ್ಟುವ ಸಾಧ್ಯತೆ ಇದೆ. ಇದರ ಜೊತೆಗೆ ಗೆದ್ದ ಹಣದಲ್ಲಿ ತಂದೆ ತಾಯಿಗೆ ಇಂತಿಷ್ಟನ್ನು ನೀಡುತ್ತಾರೆ ಅನ್ನೋದರಲ್ಲಿ ಅನುಮಾನ ಇಲ್ಲ. ಒಟ್ನಲ್ಲಿ ಕನ್ನಡಿಗರ ನೆಚ್ಚಿನ ಹನುಮ ಚೆನ್ನಾಗಿರಲಿ ಅನ್ನೋದೇ ಆಶಯ.