ವರ್ಷದ ಮಹಿಳಾ ODI ಕ್ರಿಕೆಟರ್ ಸ್ಮೃತಿ ಮಂಧಾನ

 ಸೋಮವಾರ ಐಸಿಸಿ (ICC) ಪ್ರಕಟಿಸಿದ ಏಕದಿನ ಕ್ರಿಕೆಟರ್ ಆಫ್ ದಿ ಇಯರ್ (ODI Cricketer Of The Year) ಪ್ರಶಸ್ತಿಗೆ ಭಾರತ ತಂಡದ ಆರಂಭಿಕ ಆಟಗಾರ್ತಿ, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ (Smriti Mandana) ಭಾಜನರಾಗಿದ್ದಾರೆ. 27 ವರ್ಷದ ಎಡಗೈ ಆಟಗಾರ್ತಿ ಸ್ಮೃತಿ ಮಂಧಾನ ಅವರು, 2024 ರಲ್ಲಿ ರೆಡ್ ಹಾಟ್ ಫಾರ್ಮ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅವರು ಕಳೆದ ವರ್ಷ ಆಡಿರುವ 13 ODI ಪಂದ್ಯಗಳಲ್ಲಿ 4 ಶತಕ ಹಾಗೂ 3 ಅರ್ಧಶತಕಗಳ ಸಹಾಯದಿಂದ 747 ರನ್ ಭಾರಿಸಿದ್ದಾರೆ. ಮಾತ್ರವಲ್ಲ ಮೂರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಅವರು 1 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.





ಸೋಮವಾರ ಪ್ರಕಟವಾದ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಈ ಹಿಂದೆ ಎರಡು ಭಾರಿ ಈ ಪ್ರಶಸ್ತಿ ಪಡೆದುಕೊಂಡಿರುವ ನ್ಯೂಜಿಲೆಂಡ್ ಆಟಗಾರ್ತಿ ಸುಜಿ ಬೇಟ್ಸ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಸುಜಿ ಬೇಟ್ಸ್ ಅವರು 2013 ಹಾಗೂ 2016 ರಲ್ಲಿ ಈ ಪ್ರಶಸ್ತಿ ಪಡೆದಿರುವ ದಾಖಲೆ ಮಾಡಿದ್ದಾರೆ. ಮಂದಾನ ಅವರು 2018 ಹಾಗೂ 2024 ರಲ್ಲಿ ಈ ಪ್ರಶಸ್ತಿ ಗೆಲ್ಲುವ ಮೂಲಕ ಸೂಜಿ ಬೇಟ್ಸ್ ದಾಖಲೆ ಸರಿಗಟ್ಟಿದರು.

ಟಿ-20 ಹಾಗೂ ಏಕದಿನ ಎರಡೂ ತಂಡಕ್ಕೆ ನಾಮಿನೆಟ್ ಆಗಿದ್ದ ಮಂಧಾನ

ಮಂಧಾನ ಅವರ ಜೊತೆಗೆ ಈ ಪ್ರಶಸ್ತಿಗೆ ವೊಲ್ವಾರ್ಡ್ ಹಾಗೂ ಅಟ್ಟಾಪಟ್ಟು  ODI ಕ್ರಿಕೆಟರ್ ತಂಡಕ್ಕೆ  ನಾಮಿನೇಟ್ ಆಗಿದ್ದರು. ಕಳೆದ ವರ್ಷ ODIನಲ್ಲಿ 12 ಪಂದ್ಯಗಳಲ್ಲಿ 697 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಶ್ರೀಲಂಕಾ ಪರ ಒಂಬತ್ತು ಪಂದ್ಯಗಳನ್ನು ಆಡಿರುವ ಅಟ್ಟಾಪಟ್ಟು ಒಟ್ಟು 458 ರನ್ ಗಳಿಸಿದ್ದಾರೆ. ಮಂಧಾನ ಅವರು ಕಳೆದ ವಾರ 2024 ರ ವರ್ಷದ ಐಸಿಸಿ ಮಹಿಳಾ ODI ಮತ್ತು T20I ತಂಡದಲ್ಲಿ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಜೊತೆಗೆ ಪ್ರಶಸ್ತಿ ಪಡೆಯಲು ನಾಮಿನೇಟ್ ಆಗಿದ್ದರು. ಇನ್ನೂ ಕಳೆದ ವರ್ಷ ಯುಎಇಯಲ್ಲಿ ನಡೆದ ನಡೆದ T-20 ವಿಶ್ವಕಪ್ 2024 ನಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದ ವೊಲ್ವಾರ್ಡ್, ODI ಮತ್ತು T20I ಎರಡೂ ತಂಡಗಳ ನಾಯಕರಾಗಿ ಹೆಸರಿಸಿದ್ದಾರೆ.